ಕ್ರೆಡಿಟ್ ಬಳಕೆಯ ಅನುಪಾತ: ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಹೇಗೆ ಸುಧಾರಿಸುವುದು

CRIF Credit Utilization Ratio

ಕ್ರೆಡಿಟ್ ಬಳಕೆಯ ಅನುಪಾತ ನಿಮ್ಮ ಕ್ರೆಡಿಟ್ ಸ್ಕೋರ್ ನಿರ್ಧರಿಸುವ ಪ್ರಮುಖ ಅಂಶವಾಗಿದೆ, ಹಾಗಾಗಿ ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇದೆಲ್ಲದರ ನಡುವೆ, ಉತ್ತಮ ಕ್ರೆಡಿಟ್ ರೇಟಿಂಗ್ ನಿಮಗೆ ಹೆಚ್ಚಿನ ಸಾಲದ ಮೊತ್ತ ಮತ್ತು ಕಡಿಮೆ ಬಡ್ಡಿದರಗಳಿಗೆ ಅರ್ಹತೆ ನೀಡುತ್ತದೆ, ಆದರೆ ಕಡಿಮೆ ಕ್ರೆಡಿಟ್ ರೇಟಿಂಗ್‌ನಿಂದಾಗಿ ನಿಮ್ಮ ಹಣಕಾಸಿನ ಗುರಿಗಳನ್ನು ಪೂರೈಸಲು ಕಷ್ಟವಾಗುತ್ತದೆ.. ಈ ಬ್ಲಾಗ್‌ನಲ್ಲಿ, ಕ್ರೆಡಿಟ್ ಬಳಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ನಿಮಗೆ ತಿಳಿಸಲು ಪ್ರಯತ್ನಿಸುತ್ತೇವೆ, ಅವುಗಳೆಂದರೆ:

  • ಸಾಲ ಬಳಕೆಯ ಅನುಪಾತ ಎಂದರೇನು?
  • ಕ್ರೆಡಿಟ್ ಬಳಕೆಯ ಅನುಪಾತವನ್ನು ಹೇಗೆ ಲೆಕ್ಕಹಾಕಲಾಗುತ್ತದೆ?
  • ಉತ್ತಮ ಸಾಲ ಬಳಕೆಯ ಅನುಪಾತ ಎಂದರೆ ಎಷ್ಟು?
  • ಕ್ರೆಡಿಟ್ ಬಳಕೆಯ ಅನುಪಾತವನ್ನು ಹೇಗೆ ಸುಧಾರಿಸುವುದು

 

ಕ್ರೆಡಿಟ್ ಬಳಕೆಯ ಅನುಪಾತ ಎಂದರೇನು?

ನಿಮ್ಮ ಕ್ರೆಡಿಟ್ ಬಳಕೆಯ ದರವನ್ನು ಕೆಲವೊಮ್ಮೆ ನಿಮಗಿರುವ ಕ್ರೆಡಿಟ್ ಮಿತಿಗೆ ಅನುಗುಣವಾಗಿ ನಿಮ್ಮ ಬಾಕಿ ಇರುವ ಕ್ರೆಡಿಟ್ ಕಾರ್ಡ್‌ನ ಅನುಪಾತವೆಂದು ಕರೆಯಲಾಗುತ್ತದೆ. ಇದು ಸ್ಕೋರಿಂಗ್ ಮಾದರಿಯನ್ನು ಆಧರಿಸಿರುತ್ತದೆ. ಕ್ರೆಡಿಟ್ ಸ್ಕೋರ್‌ನ ಮೇಲೆ ಅವುಗಳು 20-30% ವರೆಗೂ ಪರಿಣಾಮ ಬೀರಬಹುದು ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ನೀವು ಎಂದಿಗೂ ಬಳಸದಿದ್ದರೆ ಮತ್ತು ಅವುಗಳಲ್ಲಿ ಬ್ಯಾಲೆನ್ಸ್ ಇರದಿದ್ದರೆ, ನಿಮ್ಮ ಕ್ರೆಡಿಟ್ ಬಳಕೆ ಶೂನ್ಯವಾಗಿರುತ್ತದೆ. ನೀವು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚಿನ ಕಾರ್ಡ್‌ಗಳಲ್ಲಿ ಬ್ಯಾಲೆನ್ಸ್ ಅನ್ನು ಹೊಂದಿದ್ದರೆ, ನೀವು ಲಭ್ಯವಿರುವ ನಿಮ್ಮ ಕ್ರೇಡಿಟ್‌ನಲ್ಲಿ ಸ್ವಲ್ಪ ಭಾಗವನ್ನು ಬಳಸುತ್ತಿದ್ದೀರಿ ಎಂದರ್ಥ -ಸಾಲದಾತರು ಮತ್ತು ಕ್ರೇಡಿಟ್ ಬ್ಯೂರೋದವರು ಇದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ನಿಮ್ಮ ಕ್ರೆಡಿಟ್ ಕಾರ್ಡ್‌ಗಳಲ್ಲಿ ಯಾವಾಗಲಾದರೊಮ್ಮೆ ಕ್ರೆಡಿಟ್ ಕಾರ್ಡ್ ಬಳಕೆ ಅಧಿಕವಾಗಿದ್ದರೆ, ಅದು ನಿಮ್ಮ ಕ್ರೆಡಿಟ್ ರೇಟ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಆದಾಗ್ಯೂ ಕ್ರೆಡಿಟ್ ಬಳಕೆಯ ದರವು ನಿಯಮಿತವಾಗಿ ಹೆಚ್ಚಾಗುತ್ತಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಖಂಡಿತವಾಗಿಯೂ ಪ್ರತಿಕೂಲ ಪರಿಣಾಮ ಬೀರುತ್ತದೆ.

 

ಕ್ರೆಡಿಟ್ ಬಳಕೆಯ ಅನುಪಾತವನ್ನು ಹೇಗೆ ಲೆಕ್ಕಹಾಕಲಾಗುತ್ತದೆ?

ಕ್ರೆಡಿಟ್ ಬಳಕೆಯ ಅನುಪಾತಗಳನ್ನು ಪ್ರತಿ ಕ್ರೆಡಿಟ್ ಕಾರ್ಡ್‌ಗೆ ಅನುಗುಣವಾಗಿ (ಕಾರ್ಡ್ ಬ್ಯಾಲೆನ್ಸ್ ಅನ್ನು ಕಾರ್ಡ್‌ಗೆ ಇರುವ ಮಿತಿಯಿಂದ ಭಾಗಿಸಲಾಗುತ್ತದೆ) ಮತ್ತು ಒಟ್ಟಾರೆ ಬ್ಯಾಲೆನ್ಸ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ (ಎಲ್ಲಾ ಕಾರ್ಡ್‌ಗಳ ಒಟ್ಟು ಬಾಕಿ ಮೊತ್ತವನ್ನು ಕ್ರೆಡಿಟ್ ಮಿತಿಗಳ ಮೊತ್ತದಿಂದ ಭಾಗಿಸಲಾಗುತ್ತದೆ).

ಉದಾಹರಣೆಗೆ:

 ಪಾವತಿಸಬೇಕಾದ ಬಾಕಿಕ್ರೆಡಿಟ್ ಮಿತಿಕ್ರೆಡಿಟ್ ಬಳಕೆಯ ಅನುಪಾತ
ಕಾರ್ಡ್ 1₹0₹50,0000%
ಕಾರ್ಡ್ 2₹80,000₹100,00080%
ಕಾರ್ಡ್ 3₹10,000₹75,00013.3%

 

ಒಟ್ಟು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ / ಒಟ್ಟು ಲಭ್ಯವಿರುವ ಕ್ರೆಡಿಟ್ = ಕ್ರೆಡಿಟ್ ಬಳಕೆಯ ಅನುಪಾತ

ಈ ಸಂದರ್ಭದಲ್ಲಿ ಒಟ್ಟು ಸಾಲ ಬಳಕೆಯ ಅನುಪಾತವು 40% ಆಗಿರುತ್ತದೆ.

 

ಉತ್ತಮ ಸಾಲ ಬಳಕೆಯ ಅನುಪಾತ ಎಂದರೆ ಎಷ್ಟು?

ಕ್ರೆಡಿಟ್ ಬಳಕೆಯ ಕುರಿತಂತೆ ಇರುವ ಸಾಮಾನ್ಯ ನಿಯಮವೆಂದರೆ, ಕ್ರೆಡಿಟ್ ಬಳಕೆ ಶೇ. 30-40 ಪ್ರತಿಶತದ ನಡುವೆ ಇರಬೇಕು. ಇದು ಪ್ರತಿಯೊಂದು ಕಾರ್ಡ್ ಮತ್ತು ನಿಮ್ಮ ಒಟ್ಟು ಕ್ರೆಡಿಟ್ ಬಳಕೆಯ ಅನುಪಾತಕ್ಕೆ ಅನ್ವಯವಾಗುತ್ತದೆ. ಮೇಲೆ ತಿಳಿಸಿದ ಶೇಕಡಾವರು ಪ್ರಮಾಣಕ್ಕಿಂತಲೂ ಅಧಿಕಪ್ರಮಾಣದಲ್ಲಿ ಕ್ರೆಡಿಟ್ ಬಳಕೆ ಅನುಪಾತವಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ ಆಗ ಸಾಲದಾತರು ಇದನ್ನು ಸಾಲಕ್ಕಾಗಿ ತುಂಬಾ ಹಪಹಪಿಸುತ್ತಿರುವ ವ್ಯಕ್ತಿ ಎಂದು ಪರಿಗಣಿಸುತ್ತಾರೆ.

ಹಾಗೆಂದ ಮಾತ್ರಕ್ಕೆ ಯಾವುದೇ ಕಾರ್ಡ್‌ನಲ್ಲಿ ಕ್ರೆಡಿಟ್ ಬಳಕೆಯ 40% ಅನ್ನು ಎಂದಿಗೂ ದಾಟಲು ಸಾಧ್ಯವಿಲ್ಲ ಎಂದರ್ಥವಲ್ಲ. ಕಳೆದ 6-12 ತಿಂಗಳುಗಳಲ್ಲಿ ಕ್ರೆಡಿಟ್ ಬಳಕೆಯ ಅನುಪಾತವು ನಿರಂತರವಾಗಿ ಹೆಚ್ಚಿದ್ದರೆ ಮಾತ್ರ ಕ್ರೆಡಿಟ್ ಸ್ಕೋರ್ ಮೇಲೆ ಉಂಟಾಗುವ ಪರಿಣಾಮ ಹೆಚ್ಚು.

ಅಂತಿಮವಾಗಿ, ಈ ಕೆಳಗಿನ ಸ್ಮಾರ್ಟ್ ಕ್ರಮಗಳ ಮೂಲಕ ನಿಮ್ಮ ಕ್ರೆಡಿಟ್ ಬಳಕೆಯ ದರಗಳನ್ನು ಮತ್ತು ಕ್ರೆಡಿಟ್ ಸ್ಕೋರ್‌ಗಳನ್ನು ಸುಧಾರಿಸಿ:

  1. ಕ್ರೆಡಿಟ್ ಕಾರ್ಡ್‌ಗಳ ಬಾಕಿಯನ್ನು ಆಗಾಗ ಪಾವತಿಸುತ್ತಿರಬೇಕು – ವಿಭಿನ್ನ ವಹಿವಾಟುಳಲ್ಲಿ ಕ್ರೆಡಿಟ್ ಕಾರ್ಡ್‌ನಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯಲೆಂದು ನೀವು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದರೂ ಸಹ, ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಉಳಿದಿರುವ ಬಾಕಿ ಮೊತ್ತವನ್ನು ಪ್ರತಿ ತಿಂಗಳು ಕನಿಷ್ಠ ಪಾವತಿಮಾಡಬೇಕಾದ ಮೊತ್ತಕ್ಕಿಂತಲೂ ಅಧಿಕ ಮತ್ತು ಆಗಾಗ ಬ್ಯಾಲೆನ್ಸ್ ಪಾವತಿ ಮಾಡಲು ಪ್ರಯತ್ನಿಸಿ .ಉದಾಹರಣೆಗೆ, ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ತಿಂಗಳಿಗೊಮ್ಮೆ ಬರಬಹುದಾಗಿದ್ದರೂ ಸಹ, ನಿಮ್ಮ ಕ್ರೆಡಿಟ್ ಕಾರ್ಡ್‌ನ ಬಾಕಿ ಪಾವತಿಯನ್ನು ಪ್ರತಿ 10 ದಿನಗಳಿಗೊಮ್ಮೆ ಪಾವತಿ ಮಾಡುತ್ತಲೇ ಇರಬಹುದು. ಅಂತೆಯೇ, ನಿಮ್ಮ ಕ್ರೆಡಿಟ್ ಮಿತಿ ಮರುಪೂರಣಗೊಳ್ಳುತ್ತಲೇ ಇರುತ್ತದೆ ಮತ್ತು ಇದರಿಂದ, ನಿಮ್ಮ ಕ್ರೆಡಿಟ್ ಬಳಕೆಯ ದರಗಳು ಕಡಿಮೆ ಎಂದು ಕಂಡುಬರುತ್ತದೆ.
  2. ಹೆಚ್ಚಿನ ಕ್ರೆಡಿಟ್ ಮಿತಿಯನ್ನು ಪಡೆಯುವುದು – ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತ ಮತ್ತು ನಿಮ್ಮ ನಿಯಮಿತ ಪಾವತಿಗಳನ್ನು ನೀವು ಸಮತೋಲನದಲ್ಲಿ ಕಾಪಾಡಿಕೊಂಡು ಹೋಗುತ್ತಿದ್ದೇವೆ ಎಂದು ನೀವು ಭಾವಿಸಿದರೆ, ನಿಮ್ಮ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ಹೆಚ್ಚಿಸಲು ನೀವು ನಿಮ್ಮ ಬ್ಯಾಂಕ್ ಅನ್ನು ವಿನಂತಿಸಿಕೊಳ್ಳಬಹುದು. ಹಾಗಿದ್ದಾಗ ಪ್ರಸ್ತುತ ಕ್ರೆಡಿಟ್ ಕಾರ್ಡ್ ಬಳಕೆ ಅಷ್ಟೇ ಇದ್ದು , ಬಳಸಬಹುದಾದ ಮಿತಿ (ಬ್ಯಾಲೆನ್ಸ್) ಹೆಚ್ಚಾಗುತ್ತದೆ ಇದರಿಂದಾಗಿ ಕ್ರೆಡಿಟ್ ಬಳಕೆಯ ದರವು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ. ಆದಾಗ್ಯೂ, ಅಂತಹ ಸಮಯದಲ್ಲಿ, ಹೆಚ್ಚಿನ ಕ್ರೆಡಿಟ್ ಮಿತಿಯು, ಹೆಚ್ಚು ಖರ್ಚು ಮಾಡಲು ನಿಮ್ಮನ್ನು ಪ್ರಚೋದಿಸುತ್ತದೆ ಇದರ ಬಗ್ಗೆ ನೀವು ಜಾಗರೂಕರಾಗಿರಬೇಕು.
  3. ಮಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಲವು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದು – ನೀವು ಅನೇಕ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ಎಲ್ಲಾ ವಹಿವಾಟುಗಳಿಗೆ ಪ್ರಾಥಮಿಕ ಕ್ರೆಡಿಟ್ ಕಾರ್ಡ್ ಬಳಸುವ ಬದಲು ವಿಭಿನ್ನ ವಹಿವಾಟುಗಳಿಗೆ ವಿಭಿನ್ನ ಕಾರ್ಡ್‌ಗಳನ್ನು ಬಳಸಲು ಪ್ರಯತ್ನಿಸಿ. ಇದರಿಂದಾಗಿ, ಒಂದೇ ಕಾರ್ಡ್‌ನಲ್ಲಿ ಹೆಚ್ಚಿನ ಬಳಕೆಯ ದರ ಮತ್ತು ಇತರ ಕಾರ್ಡ್‌ಗಳಲ್ಲಿ ಕಡಿಮೆ / ಶೂನ್ಯ ಬಳಕೆಯನ್ನು ಹೊಂದಿರುವುದರ ಬದಲಿಗೆ ನೀವು ಎಲ್ಲಾ ಕ್ರೆಡಿಟ್ ಕಾರ್ಡ್‌ಗಳಲ್ಲಿ ಕಡಿಮೆ ಕ್ರೆಡಿಟ್ ಬಳಕೆಯ ದರವನ್ನು ಹೊಂದಿರುತ್ತೀರಿ.
  4. ಕಾರ್ಡ್‌ಗಳ ಬಾಕಿಯನ್ನು ಪಾವತಿಸಿದ ನಂತರ ಅವುಗಳನ್ನು ಬಳಕೆಗೆ ಮುಕ್ತವಾಗಿರಿಸಿ – ಕಾರ್ಡ್ ಅನ್ನು ಪಾವತಿಸುವ ಮೂಲಕ, ನಿಮ್ಮ ಒಟ್ಟು ಬಾಕಿ ಮೊತ್ತವನ್ನು ಕಡಿಮೆ ಮಾಡುತ್ತಿದ್ದೀರಿ. ಕಾರ್ಡ್ ಅನ್ನು ಬಳಕೆಗೆ ಮುಕ್ತವಾಗಿರಿಸುವ ಮೂಲಕ, ನಿಮ್ಮ ಒಟ್ಟು ಕ್ರೆಡಿಟ್ ಮಿತಿಯನ್ನು ನೀವು ನಿರ್ವಹಿಸುತ್ತೀರಿ – ಆ ಮೂಲಕ ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು ಕಡಿಮೆ ಮಾಡುತ್ತೀರಿ.

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನೀವು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿರಬೇಕು ಮತ್ತು ಉತ್ತಮ ಕ್ರೆಡಿಟ್ ಅಭ್ಯಾಸದ ಸಹಾಯದಿಂದ ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಕಾಯ್ದುಕೊಳ್ಳಲು ಪ್ರಯತ್ನಿಸಬೇಕು. CRIF ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸಹ ನೀವು ಪರಿಶೀಲಿಸಬಹುದು ಅದಕ್ಕಾಗಿ ಲಿಂಕ್ ಇಲ್ಲಿದೆ: Check Your Credit Score Now

 

 

Facebooktwitterlinkedinmail
youtube